
12th September 2025
ಬೈಲಹೊಂಗಲು- ಪಟ್ಟಣದ ಬೆಳಗಾವಿ ರಸ್ತೆಯಲ್ಲಿರುವ ಎಂ.ಎಸ್.ಐ.ಎಲ್ ಮದ್ಯದಂಗಡಿಯಿಂದ ಮುರಾರ್ಜಿ ದೇಸಾಯಿ ಮತ್ತು ನವೋದಯ ವಸತಿ ಶಾಲೆ ಮಕ್ಕಳಿಗೆ
ತೊಂದರೆ ಉಂಟು ಮಾಡುತ್ತಿದೆ ಎಂದು ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ ಆಕ್ರೋಶ ವ್ಯಕ್ತವಡಿಸಿದ್ದಾರೆ.
ಕೂಡಲೇ ಈ ಮದ್ಯದಂಗಡಿಯನ್ನು ಸಕಾರತರಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಮಳಿಗೆಯನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಪಟ್ಟಣದ ಮಳಿಗೆಯ ಬಳಿ ಪ್ರತಿಭಟನೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿ ಇಲ್ಲಿ ಸಂಜೆಯಾಗುತ್ತಿದ್ದಂತೆ ಮದ್ಯ ಖರೀದಿಸುವವರು ಶಾಲೆಯ ರಸ್ತೆಯಲ್ಲೇ ಕುಡಿಯುವುದು, ಬಾಟಲಿ ಒಡೆಯುವುದು, ಶಾಲಾ ಗೆಟ್ಗೆ ಹಾನಿ ಮಾಡುವುದು ಮತ್ತು ಸಿಬ್ಬಂದಿಗಳನ್ನು ಹೆದರಿಸುವಂತಹ ಕೃತ್ಯಗಳು ನಡೆಯುತ್ತಿದೆ. ವಿದ್ಯಾರ್ಥಿನಿಯರಿಗೆ ಭಯದ ವಾತಾವರಣ ಉಂಟಾಗಿದ್ದು, ಓದು ಮತ್ತು ಇರುವದು ವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.
ರೈತರು ಮತ್ತು ಬೆಳೆಗಳಿಗೂ ಹಾನಿ: ಇದಲ್ಲದೆ ಮಧ್ಯದ ಖಾಲಿ ವ್ಯಾಕೆಟ್ಗಳನ್ನು ರಸ್ತೆಯ ಅಕ್ಕವಕ್ಕದ ರೈತರ ಜಮೀನುಗಳಲ್ಲಿ ಎಸೆಯುತ್ತಿರುವುದರಿಂದ ಬೆಳೆಗಳಿಗೆ ಹಾನಿಯಾಗುತ್ತದೆ ಎಂದು ಕೋಲಕಾದ ಹಸಿದರು, ಇದರಿಂದ ರೈತರು ಸಹ ತೀವ್ರ ಸಮಸ್ಯೆಗೆ ಒಳಗಾಗಿದ್ದಾರೆ. ಕೂಡಲೇ ಈ ಮದ್ಯಂಗಡಿಯನ್ನು ಜನವಸತಿ ಇಲ್ಲದ ಕಡೆ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಅವರು ಒತ್ತಾಯಿಸಿದರು. ಪ್ರತಿಭಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ೧೫ ದಿನಗಳಲ್ಲಿ ಶೀಘ್ರ ಕ್ರಮ ಕೈಗೊಂಡು ಸ್ಥಳಾಂತರಿಸುವ ಭರವಸೆ ನೀಡಿದರು.
ಈ ವೇಳೆ, ಮಲ್ಲಿಕಾರ್ಜುನ ಬಾಜಿ , ಆನಂದ ವಾಟೀಲ, ಪಿಂಟು ಕುದರಿ, ಅರಮೇಶ್ ಕಲಾಲ, ರತ್ನ ಗೋದಿ, ಚಂದ್ರಿಕಾ ಕಳಂಕರ, ಮಲ್ಲವ್ವ ಯರಗಟ್ಟಿ, ಶಾಂತಮ್ಮಾ ಕುರಿ, ನೀಲವ್ವ ಖನಗೌಡರ, ಪ್ರೇಮವ್ವ ನಂದೆನ್ನವರ, ಪ್ರೇಮ ಚಚಡಿ, ಲಲಿತಾ ಹಂಪಣ್ಣವರ, ಮಂಜುಳಾ ತಳವಾರ, ಸೇರಿದಂತೆ ಹಲವು ಪದಾಧಿಕಾರಿಗಳು ಇದ್ದರು.
undefined
ಗಣಪತಿ ಮೆರವಣಿಗೆ ಡಿಜೆಗೆ ಪೊಲೀಸರ ಆಕ್ಷೇಪ ಲಾಠಿ ಏಟು: ಪೊಲೀಸರ ವಿರುದ್ಧ ಯುವಕರ ಆಕ್ರೋಶ
ಪರೀಕ್ಷೆ ಮತ್ತು ಕ್ರೀಡಾಕೂಟ ಒಂದೇ ದಿನ ಆಯೋಜನೆ- ಕ್ರೀಡಾ ಮತ್ತು ಶಿಕ್ಷಣ ಇಲಾಖೆಗಳ ಸಮನ್ವಯ ಕೊರತೆ -ಅಧಿಕಾರಿಗಳ ಎಡವಟ್ಟಿಗೆ ವಿದ್ಯಾರ್ಥಿಗಳಲ್ಲಿ ಆತಂಕ